top of page

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಯಲ್ಲಾಪುರದ ವಾ.ಟಿ.ಎಸ್.ಎಸ್. ಕಾಲೇಜು ವಿಧ್ಯಾರ್ಥಿಗಳ ಉತ್ತಮ ಸಾಧನೆ.


20-7-2021.ಮಂಗಳವಾರ.

ಮಂಗಳವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್ ಪದವಿಪೂರ್ವ ಕಾಲೇಜಿನ 159 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು

ವಿಜ್ಞಾನ ವಿಭಾಗದಲ್ಲಿ ಸಹನಾ ನಾಯ್ಕ 598(99.67%) ಅಂಕಗಳೊಂದಿಗೆ ಪ್ರಥಮ, ಶಿವಾನಿ ಶೇಟ್ 597 (99.5%) ಅಂಕ ಪಡೆದು ದ್ವಿತೀಯ, ಆಕಾಶ ರವಿ ಭಟ್ 591(98.5%) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸ್ವಾತಿ ವಡಮಾವ 598(99.67%) ಅಂಕಗಳೊಂದಿಗೆ ಪ್ರಥಮ, ಜ್ಯೋತಿರಾದಿತ್ಯ ಭಟ್ 558 (93%) ಅಂಕಗಳೊಂದಿಗೆ ದ್ವಿತೀಯ, ವಸುಂಧರಾ ಭಟ್ 556 (92.66%) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದ ವೈಷ್ಣವಿ ಮಿರಾಶಿ 528 (88%) ಅಂಕದೊಂದಿಗೆ ಪ್ರಥಮ ಸ್ಥಾನದಲ್ಲೂ, ಪ್ರೀತಿ ರಾವ್ 524(87.33%) ಅಂಕ ಪಡೆದು ದ್ವಿತೀಯ ಹಾಗೂ ಪಿ ಇಂದೂಧರ 506 (84.33%) ಅಂಕ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷ ಗಜಾನನ ಬಾಬುರಾವ ಭಟ್, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಪ್ರಾಂಶುಪಾಲ ಜಯರಾಮ ಗುನಗಾ, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.

---advt---

----------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------

 
 
 

ความคิดเห็น


bottom of page