top of page

ಇಂದು ಯಲ್ಲಾಪುರ ತಾಲೂಕಿನಲ್ಲಿ ಒಬ್ಬರಿಗೆ ಕೊರೋನಾ ದೃಢ


ree
ree

24-7-2021. ಶನಿವಾರ.

ಯಲ್ಲಾಪುರ.

ತಾಲೂಕಿನಲ್ಲಿ ಇಂದು ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾಹಿತಿ ನೀಡಿದ್ದಾರೆ. ತಾಲೂಕಿನ ದೇಹಳ್ಳಿಯಲ್ಲಿ ಓರ್ವರಿಗೆ ಸೋಂಕು ದೃಢಪಟ್ಟಿದೆ. ಇಂದು 255 ಜನರ ಸ್ವಾಬ್ ಟೆಸ್ಟ್ ಮಾಡಲಾಗಿದ್ದು ಇನ್ನೂ 229 ಜನರ ಸ್ವಾಬ್ ಟೆಸ್ಟ್ ವರದಿ ಬರಬೇಕಿದೆ. ತಾಲೂಕಿನಲ್ಲಿ 19 ಸಕ್ರೀಯ ಕೊರೋನಾ ಪ್ರಕರಣಗಳು ಇದ್ದು, ಇಂದು ನಾಲ್ಕು ಜನರು ಗುಣಮುಖರಾಗಿ ಹಿಂದಿರುಗಿದ್ದಾರೆ ಎಂದು ಮಾಹಿತಿ ನೀಡಿದರು.

ನಾಳೆ ತಾಲೂಕಾ ಆಸ್ಪತ್ರೆಯಲ್ಲಿ 100 ಕೋವಿಡ್ ಲಸಿಕೆ ಲಭ್ಯವಿದ್ದು, ಕಾಲೆಜು ವಿಧ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮಾತ್ರ ಮೊದಲ ಡೋಸ್ ಹಾಗೂ ಮೊದಲನೆ ಡೋಸ್ ಪಡೆದು 84 ದಿನ ಆದವರಿಗೆ ಎರಡನೇ ಡೋಸ್ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.

ree
ree

--------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------



 
 
 

Comments


bottom of page