ಯಲ್ಲಾಪುರ ; ಡೆಂಗ್ಯೂ ನಿಯಂತ್ರಣ ಮಾಸಾಚರಣೆ.
- news e - yellapur
- Jul 24, 2021
- 1 min read
24-7-2021. ಶನಿವಾರ.

ಯಲ್ಲಾಪುರ.
ಜನಸಮುದಾಯದ ಸಹಕಾರದಿಂದ ಹಾಗೂ ಜನಜಾಗ್ರತಿಯಿಂದ ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.

ಅವರು ಪಟ್ಟಣದ ತಾ.ಪಂ.ಸಭಾಭವನದಲ್ಲಿ ನಡೆದ ಡೆಂಗ್ಯೂ ಮಾಸಾಚರಣೆ ಹಾಗೂ ಕೋವಿಡ್ ಮೂರನೆ ಅಲೆ ಕುರಿತು ಮುಂಜಾಗ್ರತೆ ಕುರಿತು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಇ.ಒ. ಎನ್.ಆರ್.ಹೆಗಡೆ,ತಾ.ಪಂ.ವ್ಯವಸ್ಥಪಕ ಗಂಗಾಧರ ಭಟ್ಟ, ಡಾ.ತೇಜಸ್ ಹಾಗೂ ಎಸ್.ಟಿ.ಭಟ್ಟ ತರಬೇತಿ ನೀಡಿದರು. ಮಹೇಶ ತಾಳಿಕೋಟಿ ವಂದಿಸಿದರು.


--------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt *****************************************************
ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------
Kommentare