top of page

ವರುಣಾಘಾತಕ್ಕೆ ತತ್ತರಿಸಿದ ಕಳಚೆ


ree

23-7-2021. ಶುಕ್ರವಾರ.

ಯಲ್ಲಾಪುರ.

ಗುರುವಾರ ಮತ್ತು ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಕಳಚೆ ಭಾಗ ತತ್ತರಿಸಿದೆ. ಈ ಪ್ರದೇಶದಲ್ಲಿ ಸ್ಥಳಗಳಲ್ಲಿ ಗುಡ್ಡ ಕುಸಿದು ಹಾನಿ ಸಂಭವಿಸಿದೆ. ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಹಲವರ ಅಡಕೆ ತೋಟ ಹಾನಿಗೊಳಗಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಮಣ್ಣು ಕುಸಿತದಿಂದಾಗಿ ಕೆಲವರ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ.

ree

ಇಳಕಲ್- ಮಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಯಲ್ಲಾಪುರ ತಾಲೂಕಿನ ತಳಕೆಬೈಲ್ ಮತ್ತು ಬಾಸಲ್ (ಹುಟ್ಟುರ್ತೆ) ಸಮೀಪ ಅನೇಕ ಕಡೆಗಳಲ್ಲಿ ಭೂ ಕುಸಿತಗಳುಂಟಾಗಿದ್ದು ಸಂಪೂರ್ಣ ಮಾವಿನಮನೆ ಪಂಚಾಯತ ಮತ್ತು ವಜ್ರಳ್ಳಿ ಪಂಚಾಯತದ ಕಳಚೆ, ಇರಾಪೂರ ಗ್ರಾಮಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿವೆ. ಬಾರೆಯಿಂದ ಕೈಗಾ(ಮಲ್ಲಾಪುರ) ರಸ್ತೆಯಲ್ಲಿಯೂ ಅಲ್ಲಲ್ಲಿ ಕುಸಿತಗಳುಂಟಾಗಿದ್ದು ಮಾವಿನಮನೆ ಪಂಚಾಯತದ ಗ್ರಾಮಗಳಿಗೆ ಅವಶ್ಯಕ ವಸ್ತುಗಳ ಪೂರೈಕೆ ಮಾಡುವುದು ಅಸಾಧ್ಯವೆಂಬಂತಾಗಿದೆ. ಮೊಬೈಲ್ ಫೋನ್ ಮತ್ತು ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ


-----------------

23-7-2021. ಶುಕ್ರವಾರ.

ಅಂಕೋಲ;

ree

ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲೂಕಿನ ಮಂಜಗುಣಿ,ವಾಸರಕುದ್ರಗಿ,ಶಿರಗುಂಜಿ ಮುಂತಾದ ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿದೆ. ಜಲಾವೃತ ಪ್ರದೇಶಗಳ ಜನರನ್ನು ಬೋಟ್ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸಾಗಿಸಲಾಗಿದೆ.

--------

ಯಲ್ಲಾಪುರದಲ್ಲಿ ಇಂದು ನಾಲ್ಕು ಜನರಿಗೆ ಕೊರೋನಾ ;

ree

ಯಲ್ಲಾಪುರ ತಾಲೂಕಿನ ಕಿರವತ್ತಿಯ ನಾಲ್ಕು ಜನರಿಗೆ ಶುಕ್ರವಾರ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ತಿಳಿಸಿದ್ದಾರೆ.

````ADVT--

ree
ree

---------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------


 
 
 

Comments


bottom of page