top of page

ಗ್ರಾಮ ಪಂಚಾಯತಿ ಮೂಲಕ ರಸ್ತೆ ಪಕ್ಕದ ಕಸ ವಿಲೇವಾರಿ .


ree

24-7-2021. ಶನಿವಾರ.

ಯಲ್ಲಾಪುರ:

ತಾಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧಡೆ ಕಿಡಿಗೇಡಿಗಳು ರಸ್ತೆಪಕ್ಕದಲ್ಲಿ ಎಸೆದಿದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯತ ವತಿಯಿಂದ ಶನಿವಾರ ಶ್ರಮದಾನ ನಡೆಸಿ ಸ್ವಚ್ಚಗೊಳಿಸಲಾಗಿದೆ.

ree

ತಟಗಾರ ಗ್ರಾಮದ ರಬ್ದಮನೆ ಘಟ್ಟ, ನಿಸರ್ಗಮನೆ ರಸ್ತೆ ಹಾಗೂ ಕೊಂಬೆಪಾಲ್ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ತುಂಬಿದ್ದವು. ಗಾಜಿನ ಬಾಟಲಿಗಳನ್ನು ಒಡೆದು ರಸ್ತೆಯ ಮೇಲೆ ಚಲ್ಲಲಾಗಿತ್ತು. ಈಚೆಗೆ ನಡೆದ ವಾರ್ಡ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಪ್ರದೇಶವನ್ನು ಸ್ವಚ್ಚಗೊಳಿಸುವಂತೆ ಜನ ಆಗ್ರಹಿಸಿದ್ದರು. ಸಭೆಯಲ್ಲಿ ನೀಡಿದ ಭರವಸೆಯಂತೆ, ಶನಿವಾರ ಬೆಳಗ್ಗೆ ಗ್ರಾಮ ಪಂಚಾಯತ ವತಿಯಿಂದ ರಸ್ತೆಯ ಎರಡೂ ಬದಿ ಬಿದ್ದಿದ್ದ ಭಾರೀ ಪ್ರಮಾಣದ ತ್ಯಾಜ್ಯವನ್ನು ಆರಿಸಲಾಗಿದೆ. ಗ್ರಾ.ಪಂ ಅಧ್ಯಕ್ಷ ಪರಮೇಶ್ವರ ಗಾಂವ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ತ್ಯಾಜ್ಯ ಎಸೆಯುವವರಿಗೆ 1ಸಾವಿರ ರೂ ದಂಡ ವಿಧಿಸುವಂತೆ ಜನರು ಆಗ್ರಹಿಸಿದ್ದಾರೆ. ನರಸಿಂಹ ಬೊಳಪಾಲ, ಮಂಜುನಾಥ ಭಟ್ಟ ಕೊಂಬೆಪಾಲ್, ರಮೇಶ ಹೆಗಡೆ, ಅನಂತ ಭಟ್ಟ ಬದ್ನೆಪಾಲ್ ಹಾಗೂ ಅಚ್ಯುತಕುಮಾರ ಗ್ರಾ.ಪಂ ಸಿಬ್ಬಂದಿ ಕೇಶವ ಮುಂತಾದವರು ಇದ್ದರು.

----ADVT--

ree
ree

--------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------




 
 
 

Comments


bottom of page