top of page

ಭಾರಿ ಮಳೆಗೆ ಉಮ್ಮಚಗಿಯಲ್ಲಿ ಹಾನಿ.


ree

23-7-2021. ಶುಕ್ರವಾರ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಹಲವೆಡೆ ಹಾನಿ ಸಂಭವಿಸಿದೆ. ಶೀಗೇಮನೆ ರೈತರು ಹೊಲಕ್ಕೆ ಹೋಗುವ ರಸ್ತೆ ಕುಸಿತ ಉಂಟಾಗಿದೆ.

ree

ತುಡುಗುಣಿಯಿಂದ ಸೂರಿಮನೆಗೆ ಹೋಗುವ ರಸ್ತೆ ಕೂಡ ತುಡುಗುಣಿ ಹೊಳೆಯ ಪಕ್ಕದಲ್ಲಿ ಕುಸಿತವಾಗುತ್ತಿದ್ದು, ತುಡುಗುಣಿಯ ನಾಗೇಂದ್ರ ಭಟ್ಟ, ಅಶೋಕ ಹೆಗಡೆ, ಎನ್.ಜಿ.ಹೆಗಡೆ ಅವರ ಅಡಿಕೆ ತೋಟಗಳು ಜಲಾವೃತವಾಗಿ ತೋಟಕ್ಕೆ ಹಾಕಿದ ಮಣ್ಣು,ಗೊಬ್ಬರ ಕೊಚ್ಚಿ ಹೋಗಿರುತ್ತದೆ. ಕೆಲವು ಕಡೆ ಅಡಿಕೆ ಮರಗಳು ಕಿತ್ತು ಬೀಳುತ್ತಿವೆ. ನೀರಿನಲ್ಲಿ ಮುಳುಗಿದ ಕಾಳುಮೆಣಸಿನ ಬಳ್ಳಿಗಳು ಹಾಳಾಗುತ್ತಿವೆ.ಹುಣಸೆಮನೆಯ ಕುಪ್ಪಯ್ಯ ಪೂಜಾರಿ ಅವರಿಗೆ ಸೇರಿದ ಅಡಿಕೆ ತೋಟದ ಮೇಲೆ ಮರ ಬಿದ್ದು ಇಪ್ಪತ್ತಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಯಾಗಿದೆ. ಸೂರಿಮನೆ ಸಮೀಪ ಹತ್ತಕ್ಕಿಂತ ಹೆಚ್ಚು ಕಂಬಗಳು ಮುರಿದು ಬಿದ್ದಿರುತ್ತವೆ. ತೋಟದಕಲ್ಲಳ್ಳಿ ಗ್ರಾಮದ ಆಚೆಬಾಳೆಗದ್ದೆಯಲ್ಲೂ ಲೈನ್ ಮೇಲೆ ಮರ ಬಿದ್ದು ಹಾನಿಯಾಗಿದೆ.

ree

ಹಾನಿಗೊಳಗಾದ ಪ್ರದೇಶಗಳಿಗೆ ಉಮ್ಮಚ್ಗಿ ಪಂಚಾಯತದ ಉಪಾಧ್ಯಕ್ಷ ಶಿವರಾಯ ಪೂಜಾರಿ, ಪಿ.ಡಿ.ಒ.ಶ್ರೀಧರ ಪಟಗಾರ, ವಿಲೇಜ್ ಅಕೌಂಟೆಂಟ್ ಸವಿತಾ ಭಜಂತ್ರಿ, ಗ್ರಾ.ಪಂ.ಸದಸ್ಯರುಗಳಾದ ಗ.ರಾ.ಭಟ್, ಕುಪ್ಪಯ್ಯಾ ಪೂಜಾರಿ, ಖೈತಾನ್ ಡಿಸೋಜ, ಅಶೋಕ ಪೂಜಾರಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

---ADVT---

ree
ree

---------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------



 
 
 

Comments


bottom of page