ಯಲ್ಲಾಪುರ ಪಟ್ಟಣದಲ್ಲಿ ಜನಜಂಗುಳಿ
- news e - yellapur
- Jun 21, 2021
- 1 min read

ಯಲ್ಲಾಪುರ.
ಕೋವಿಡ್ ಲಾಕ್‍ಡೌನ್ ಸಡಿಲಿಕೆಯ ಸಂದರ್ಭದಲ್ಲಿ ಸೋಮವಾರ ಪಟ್ಟಣದಲ್ಲಿ ವಿಪರೀತ ಜನಜಂಗುಳಿ ಕಂಡುಬಂತು. ಪಟ್ಟಣದ ವಿವಿಧ ರಸ್ತೆಗಳಲ್ಲಿ ಅಂಗಡಿ-ಮುಂಗಟ್ಟುಗಳ ಮುಂದೆ ರಶ್ ಇತ್ತು. ಎಲ್ಲಿ ನೋಡಿದರಲ್ಲಿ ವಾಹನಗಳ ಭರಾಟೆ, ಓಡಾಟ ಕಂಡುಬಂತು.

ಪಟ್ಟಣದ ಬೆಲ್ ರಸ್ತೆ,ಬಸ್ ನಿಲ್ಧಾಣ ರಸ್ತೆ, ಏಪಿಎಂಸಿ ರಸ್ತೆ ಮುಂತಾದೆಡೆ ಜನಜಂಗುಳಿ ಹಾಗೂ ಈ ರಸ್ತೆಗಳ ಪಕ್ಕದಲ್ಲಿ ಅನತಿ ದೂರದವರೆಗೂ ವಾಹನಗಳನ್ನು ನಿಲ್ಲಿಸಿಡಲಾಗಿತ್ತು.
ಪಟ್ಟಣದಲ್ಲಿ ಬಹುತೇಕ ಎಲ್ಲ ಅಂಗಡಿಗಳೂ ಓಪನ್ ಆಗಿದ್ದವು. ಪುಸ್ತಕದ ಅಂಗಡಿಗಳು,ಸ್ಟೇಷನರಿ ಅಂಗಡಿಗಳು,ಜರಾಕ್ಸ್ ಅಂಗಡಿಗಳು, ಬಟ್ಟೆ ಅಂಗಡಿಗಳು ಬಾಗಿಲು ತೆರೆದುಕೊಂಡವು. ಈ ಎಲ್ಲ ಅಂಗಡಿಗಳಲ್ಲಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಜನರು ಖರಿದಿಗಾಗಿ ಮುಗಿಬಿದ್ದಿರುವುದು ಕಂಡುಬಂತು.

ಕೆಲವು ಹೋಟೇಲ್‍ಗಳು ಓಪನ್ ಆಗಿದ್ದು, ಇನ್ನು ಕೆಲವು ಪ್ರಮುಖ ಹೊಟೇಲ್‍ಗಳು ಒಂದೆರಡು ದಿನಗಳಲ್ಲಿ ಓಪನ್ ಆಗಲಿವೆ. ಬ್ಯಾಂಕ್,ಸೊಸೈಟಿಗಳಲ್ಲಿ ವಿವಿಧ ಕೆಲಸಗಳಿಗಾಗಿ ಮತ್ತು ಹೆಸ್ಕಾಂ ಕಛೇರಿಯ ಮುಂದೆ ಬಿಲ್ ತುಂಬಲು ಜನರು ಸಾಲುಗಟ್ಟಿ ನಿಂತಿದ್ದರು.
------------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LDx7u0jeklJ4M91sLRx6cu
-------------------------------------------------------------------------------------------------
Comments