ಸರಳವಾಗಿ ನಡೆದ ಸ್ವರ್ಣವಲ್ಲೀ ಶ್ರೀಗಳ ವರ್ಧಂತಿ ಉತ್ಸವ;
- news e - yellapur
- Jun 19, 2021
- 1 min read

ಯಲ್ಲಾಪುರ
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ 54ನೇ ವರ್ಧಂತ್ಯುತ್ಸವವು ಶನಿವಾರ ಶ್ರೀಮಠದಲ್ಲಿ ಸರಳವಾಗಿ ನಡೆಯಿತು,
ವರ್ಧಂತ್ಯುತ್ಸವದ ಅಂಗವಾಗಿ ಅಥರ್ವಶೀರ್ಷ ಹವನ, ಮಹಾಮೃತ್ಯುಂಜಯ ಹವನ, ಆಯುಷ್ಯ ಚರು ಹವನ ಶ್ರೀ ಸೂಕ್ತ- ಪುರುಷ ಸೂಕ್ತ ಹವನ ನಡೆದವು.

ಶನಿವಾರ ಬೆಳಿಗ್ಗೆ ಸ್ವತಃ ಶ್ರೀಗಳು ಪವಿತ್ರ ವೃಕ್ಷಾರೋಪಣ ನೆರವೇರಿಸಿ, ಸಸಿಗೆ ನೀರೆರೆದಿದ್ದರು.
ಕೋವಿಡ್ 19 ರೋಗವು ಶೀಘ್ರವಾಗಿ ನಿವಾರಣೆಯಾಗಿ ಎಲ್ಲ ಜನರಿಗೆ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ಧನ್ವಂತರಿ ಹವನವನ್ನು ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಶಿರಸಿಯ ಸರಕಾರಿ ಪಂಡಿತ್ ಆಸ್ಪತ್ರೆ, ಟಿ.ಎಸ್.ಎಸ್ ಆಸ್ಪತ್ರೆ, ಮಹಾಲಕ್ಷ್ಮಿ ಆಸ್ಪತ್ರೆ, ಸಿಟಿ ಸ್ಕ್ಯಾನ್ ಸೆಂಟರ್ ಆಸ್ಪತ್ರೆಗಳಲ್ಲಿ 180 ಕರೋನಾ ರೋಗಿಗಳಿಗೆ ಮತ್ತು ಇತರ ರೋಗಿಗಳಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ ಶ್ರೀಮಠದಿಂದ ಊಟವನ್ನು ವಿತರಿಸಲಾಯಿತು.
------------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LDx7u0jeklJ4M91sLRx6cu
-------------------------------------------------------------------------------------------------




Comments