top of page

ಯಲ್ಲಾಪುರದಲ್ಲಿ ವ್ಯಾಕ್ಸಿನ್ ಮೇಳಕ್ಕೆ ಚಾಲನೆ;


ಯಲ್ಲಾಪುರ.

ಪಟ್ಟಣ ಏಪಿಎಂಸಿ ಆವಾರದ ರೈತ ಭವನದಲ್ಲಿ ಸೋಮವಾರ ಕೋವಿಡ್ ವ್ಯಾಕ್ಸಿನ್ ಮೇಳಕ್ಕೆ ಚಾಲನೆ ನೀಡಲಾಯಿತು. ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಅವರು ಈ ಮೇಳಕ್ಕೆ ಚಾಲನೆ ನೀಡಿದರು. ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆದು ಕೊರೋನಾ ಸೋಂಕನ್ನು ದೂರಮಾಡಬೇಕು ಎಂದರು.


ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ಮಾತನಾಡಿ, 18ರಿಂದ 44 ವರ್ಷ ವಯೋಮಾನದ, ಈಗಾಗಲೇ ಗುರುತಿಸಲಾದ ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಅವರ ಕುಟುOಬದವರಿಗೆ, ಆರೋಗ್ಯ ಕಾರ್ಯಕರ್ತರಿಗೆ, ಕಟ್ಟಡ ಕಾರ್ಮಿಕರಿಗೆ, ಅಡಕೆ ಮಂಡಿಗಳ ಕಾರ್ಮಿಕರಿಗೆ,ಪೋಲೀಸ್ ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರಿಗೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅವರ ಕುಟುಂಬದವರಿಗೆ,ವ್ಯಾಪಾರಸ್ಥರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಮತ್ತು ಈಗಾಗಲೇ ಮೊದಲ ಡೋಸ್ ಪಡೆದು 84 ದಿನ ಆದವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದರು.


ಈ ಸಂದರ್ಭದಲ್ಲಿ ಏಪಿಎಂಸಿ ಅಧ್ಯಕ್ಷ ಎಂ.ಜಿ.ಭಟ್ ಸಂಕದಗುಂಡಿ, ಕಾರ್ಯದರ್ಶಿ ಮಂಜುನಾಥ ಹುಬ್ಬಳ್ಳಿ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಅಡಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ, ಪಟ್ಟಣ ಪಂಚಾಯತಿ ಸದಸ್ಯ ಸತೀಶ ನಾಯ್ಕ್, ಮುಂತಾದವರು ಇದ್ದರು.

------------------------------------------------------------------------------------------------

-------------------------------------------------------------------------------------------------



 
 
 

Comments


bottom of page