top of page

ಯಲ್ಲಾಪುರ; ಶನಿವಾರದ ಮಳೆ ಅವಘಡಗಳು ಹಾಗೂ ಕೊರೋನಾ ವರದಿ.


ಯಲ್ಲಾಪುರ;

ತಾಲೂಕಿನಲ್ಲಿ ಶನಿವಾರ ಬೆಳಿಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆ ಹಾಗೂ ಗಾಳಿಯಿಂದಾಗಿ ವಿವಿದೆಡೆ ಕೆಲವು ಅವಘಡಗಳು ಸಂಭವಿಸಿವೆ.


ಮದನೂರು ಗ್ರಾಮ ಪಂಚಾಯತಿ ವ್ಯಾಪತಿಯ ಮಾದೇವಕೊಪ್ಪದಲ್ಲಿ ಬಾಬು ನಕಲು ಪಾಟೀಲ್ ಅವರ ಮನೆ ಗೋಡೆ ಕುಸಿದು ಹಾನಿಯಾಗಿದೆ. ಹುತ್ಕಂಡ ಗ್ರಾಮದ ಸಾಸಿವೆಗದ್ದೆಯ ನರಸಿಂಹ ಸಾತೊಡ್ಡಿ ಅವರ ಆಕಳೊಂದು ಮನೆಯ ಸಮೀಪದ ಹಳ್ಳದಲ್ಲಿ ಬಿದ್ದು ಮೃತಪಟ್ಟಿದೆ. ಈ ಎರಡೂ ಘಟನಾ ಸ್ಥಳಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೆಟ್ಟಿ ನೀಡಿ ಹಾನಿಯನ್ನು ಅಂದಾಜಿಸಿದ್ದಾರೆ.

ಕೊರೋನಾ ವರದಿ;



ಯಲ್ಲಾಪುರದಲ್ಲಿ ಶನಿವಾರ 11 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಂದೊಳ್ಳಿಯಲ್ಲಿ 10 ( ಯಲ್ಲಾಪುರ ನಗರ ಸೇರಿದಂತೆ) ಕುಂದರಗಿಯಲ್ಲಿ 1 ಪ್ರಕರಣ ದಾಖಲಾಗಿದೆ. ಶನಿವಾರ ಒಟ್ಟೂ 324 ಜನರ ಸ್ವಾಬ್ ಟೆಸ್ಟ್ ಮಾಡಲಾಗಿದೆ. ಇನ್ನೂ 286 ಜನರ ಫಲಿತಾಂಶ ಬರಬೇಕಿದೆ. ಶನಿವಾರ 14 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

------------------------------------------------------------------------------------------------

-------------------------------------------------------------------------------------------------



 
 
 

Comments


bottom of page