ಯಲ್ಲಾಪುರ ಪಟ್ಟಣದಲ್ಲಿ ಮಂಗಳವಾರ ಜನಸಂದಣಿ.
- news e - yellapur
- Jun 22, 2021
- 1 min read

ಯಲ್ಲಾಪುರ
ಪಟ್ಟಣದಲ್ಲಿ ಮಂಗಳವಾರ ಜನಜಂಗುಳಿ ಮುಂದುವರಿದಿತ್ತು. ಜನರ ಓಡಾಟ ಹಾಗೂ ವಾಹನಗಳ ಭರಾಟೆಯಿಂದ ಪ್ರಮುಖ ರಸ್ತೆಗಳಲ್ಲಿ ವಿಪರೀತ ರಶ್ ಕಂಡುಬಂತು. ವಾಹನಗಳ ಓಡಾಟದ ಅಬ್ಬರಕ್ಕೆ ಟ್ರಾಪಿಕ್ ಜಾಮ್ ಸಹ ಉಂಟಾಗುವಂತಾಯಿತು.

ಗ್ರಾಮೀಣ ಭಾಗದಿಂದ ಹೆಚ್ಚು ಜನರು ಪಟ್ಟಣಕ್ಕೆ ಆಗಮಿಸಿದ್ದರು. ದಿನಸಿ ಅಂಗಡಿ ಹಾಗೂ ವಿವಿಧ ಅಂಗಡಿಗಳ ಮುಂದೆ ಜನರು ಸಾಲಾಗಿ ನಿಂತು ವಸ್ತುಗಳನ್ನು ಖರೀದಿಸಿದರು. ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಿಡಲಾಗಿತ್ತು.
ಪಟ್ಟಣದಿಂದ ಮಂಗಳವಾರ ಜಿಲ್ಲೆಯ ವಿವಿಧ ಶಹರಗಳಿಗೆ ಹತ್ತಾರು ಬಸ್‍ಗಳು ಸಂಚರಿಸಿದವು. ಹೊರ ಭಾಗಗಳಿಂದಲೂ ಬಸ್‍ಗಳ ಆಗಮನವಾಗಿತ್ತು. ಪ್ರಯಾಣಿಕರೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಬಸ್ ನಿಲ್ಧಾಣಕ್ಕೆ ಆಗಮಿಸಿದ್ದರು.

------------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LDx7u0jeklJ4M91sLRx6cu
-------------------------------------------------------------------------------------------------
Commentaires