'ಮರ್ಕ್ಯುರಿ' ಬಾಳೆಗದ್ದೆ ಹುಡುಗರ ಕಿರುಚಿತ್ರ.
- news e - yellapur
- Jun 17, 2021
- 1 min read


ಯಲ್ಲಾಪುರ
ಲಾಕ್ ಡೌನ್ ಸಮಯದಲ್ಲಿ ಸಕಾರಾತ್ಮಕವಾಗಿ ತೊಡಗಿಕೊಂಡ ನಾಲ್ಕಾರು ಹುಡುಗರ ಸಾಧನೆಯ ಫಲವಿದು. ಮನೆಯಲ್ಲಿ ಕುಳಿತು ಸಮಯವನ್ನು ಹಾಳು ಮಾಡಬಾರದೆಂದು ಭಾವಿಸಿ ಕಿರುಚಿತ್ರವೊಂದರ ನಿರ್ಮಾಣಕ್ಕೆ ತೊಡಗಿಕೊಂಡರು.
ಹಾಗೆ ತೊಡಗಿಕೊಂಡವರೆಲ್ಲ ತಾಲೂಕಿನ ಬಾಳೆಗದ್ದೆಯ ಹುಡುಗರು. ಕೆಲವರು ಓದುತ್ತಿರುವವರಾದರೆ ಚಿತ್ರದ ಸೂತ್ರಧಾರ, ಅವಿ ಡಾರ್ಲಿಂಗ್ ಎಂಬ ಹೆಸರಿನಿಂದ ನಿರ್ದೇಶನ ಕೈಗೆತ್ತಿಕೊಂಡ ಅವಿನಾಶ್ ಪಟಗಾರ ಹೊಟೇಲ್ ಮೆನೆಜ್ಮೆಂಟ್ ಓದಿರುವ ಯುವಕ.
ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಕಿರುಚಿತ್ರದಲ್ಲಿ ಯುವಕರೇ ಪಾತ್ರಧಾರಿಗಳು. ಎಂಬತ್ತರಷ್ಟು ಚಿತ್ರೀಕರಣ ಬಾಳೆಗದ್ದೆ, ತೋಟದಕಲ್ಲಳ್ಳಿ, ಅರೆಕಾನ್, ರಾಮದೇವರಗುಡ್ಡ, ಮಾಸ್ತಿಬೇಣ ಮೊದಲಾದಕಡೆ ನಡೆಸಿದ್ದು ಇನ್ನು ಹತ್ತು ದಿನದ ಚಿತ್ರೀಕರಣ ಮುಗಿದರೆ ಚಿತ್ರ ನೋಡುಗರ ಮುಂದೆ ಯೂಟ್ಯೂಬ್ ಲಿಂಕ್ ಮೂಲಕ ತೆರೆದುಕೊಳ್ಳುತ್ತದೆ.
ಇನ್ನುಳಿದ ಹತ್ತು ದಿನಗಳ ಚಿತ್ರೀಕರಣಕ್ಕೆ ಬಿಸಿಲಿನ ಅವಶ್ಯಕತೆ ಇದ್ದು ಅದು ಸಾಧ್ಯವಾಗಲೆಂದು ಚಿತ್ರ ತಂಡ ಕಾಯುತ್ತಿದೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಕಾಶ್ ಪಟಗಾರ ಬಾಳೆಗದ್ದೆ, ಮಣಿ ಪಟಗಾರ ಬಾಳೆಗದ್ದೆ, ಚಂದು ಪಟಗಾರ್ ಇದ್ದರೆ, ಇನ್ನುಳಿದಂತೆ ಕಲಾವಿದರಾಗಿ ಸುಬ್ರಹ್ಮಣ್ಯ ಪಟಗಾರ ಬಾಳೆಗದ್ದೆ, ವಿನಾಯಕ ಬಾಳೆಗದ್ದೆ, ಲೋಕೇಶ್, ಮಹೇಶ್, ಮಣಿಕಂಠ, ವಿಜಯ್, ಸಂತೋಷ ರಾಮಚಂದ್ರ ಗುನಗ, ಉದಯ್, ಮನೋಜ್ ಸಿದ್ದಿ, ಗಣೇಶ್ ಪಟಗಾರ ಮೊದಲಾದವರಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ ಅವಿ ಡಾರ್ಲಿಂಗ್. ಸಹಕಾರ ಮಣಿ ಬಾಳೆಗದ್ದೆ. ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.
------------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/EAt0hgyTwn3695StUfMwTh
-------------------------------------------------------------------------------------------------
ವೆಬ್ ಸೈಟ್ ಲೋಕಾರ್ಪಣೆಯ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ..
https://youtu.be/OQGA9dY-MUs
Comments