top of page

ಇಂದು ಕೋವಿಡ್-19 ವ್ಯಾಕ್ಸಿನ್ ಮಹಾಮೇಳಕ್ಕೆ ಚಾಲನೆ



ಯಲ್ಲಾಪುರ.

ಸೋಮವಾರ ಯಲ್ಲಾಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ ಕೋವಿಡ್-19 ವ್ಯಾಕ್ಸಿನ್ ಮಹಾಮೇಳ ನಡೆಯಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಈ ಮಹಾಮೇಳದಲ್ಲಿ 18ರಿಂದ 44 ವಯೋಮಾನದ ಮುಂಚೂಣಿ ಕೊರೋನಾ ವಾರಿಯರ್ಸ್‍ಗಳಾದ ಆರೋಗ್ಯ ಕಾರ್ಯಕರ್ತರು ಹಾಗೂ ಅವರ ಕುಟುಂಬದವರಿಗೆ, ಅಂಗನವಾಡಿ ಸಹಾಯಕಿಯರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅವರ ಕುಟುಂಬದವರು,ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರಿಗೆ, ಅಂಗನವಾಡಿ ಕಾರ್ಯಕರ್ತೆಯರು, ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು, ಅಂಗಡಿಕಾರರು, ವ್ಯಾಕ್ಸಿನ್ ನೀಡಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಹಾಗೂ ಮೊದಲ ಡೋಸ್ ಪಡೆದು 84 ದಿನ ಪೂರೈಸಿದವರಿಗೆ ಎರಡನೇ ಡೋಸ್ ನೀಡಲಾಗುವುದು.


ಯಲ್ಲಾಪುರ ಪಟ್ಟಣದ ಏಪಿಎಂಸಿ ಆವಾರದಲ್ಲಿ ಸೋಮವಾರ ಬೆಳಿಗ್ಗೆ 10.30ಕ್ಕೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ್ ಅವರು ವ್ಯಾಕ್ಸಿನ್ ಮಹಾಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ಡಾ.ಪವಾರ್ ತಿಳಿಸಿದ್ದಾರೆ.

 
 
 

Comments


bottom of page