top of page

ಕುಂಭದ್ರೋಣ ಮಳೆಗೆ ಹಲವು ಅವಘಢ. ;


ree

23-7-2021. ಶುಕ್ರವಾರ.

ಯಲ್ಲಾಪುರ.

ಗುರುವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಲವೆಡೆ ಅವಘಡಗಳು ಸಂಭವಿಸಿವೆ. ತಾಲೂಕಿನ ಕಳಚೆ ವ್ಯಾಪ್ತಿಯ ಹೊಸಕುಂಬ್ರಿಯಲ್ಲಿ ಗುಡ್ಡ ಕುಸಿದಿದೆ ಎನ್ನಲಾಗಿದೆ.

ree

ತೆಲಂಗಾರ ಬಳಿ ರಸ್ತೆಯ ಪಕ್ಕದ ಧರೆ ಕುಸಿದಿದೆ. ಕಳಚೆ ಭಾಗದಲ್ಲಿ ಅಡಕೆ ತೋಟ, ಗೇರು ಪ್ಲಾಟ್‍ಗೆ ನೀರು ನುಗ್ಗಿ ಹಾನಿಯಾದ ವರದಿಯಾಗಿದೆ.


ಆರೋಗ್ಯಕೇಂದ್ರಕ್ಕೆ ನುಗ್ಗಿದ ನೀರು;

ತಾಲೂಕಿನ ವಜೃಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಮಳೆ ನೀರು ನುಗ್ಗಿದೆ.

ree

ಹಳವಳ್ಳಿ-ಕಲ್ಲೇಶ್ವರ ಭಾಗದಲ್ಲಿ ಪ್ರವಾಹದ ಆತಂಕ;

ತಾಲೂಕಿನ ಗಡಿಭಾಗವಾದ ಹಳವಳ್ಳಿ, ಕಲ್ಲೇಶ್ವರ ಭಾಗದಲ್ಲಿ ಗಂಗಾವಳಿ ನದಿಯು ತುಂಬಿ ಹರಿಯುತ್ತಿದೆ. ಕ್ಷಣಕ್ಷಣಕ್ಕೆ ನೀರಿನ ಮಟ್ಟ ಏರುತ್ತಿದೆ. ಈಗಾಗಲೇ ನದಿ ತೀರದ ಹಲವು ಭಾಗಗಳಲ್ಲಿ ತೋಟ, ವಸತಿ ಪ್ರದೇಶಕ್ಕೆ ನೀರು ನುಗ್ಗಿದೆ ಎಂದು ಈ ಭಾಗದ ಜನರು ತಿಳಿಸಿದ್ದಾರೆ.

ree

---ADVT----

ree
ree

---------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------




 
 
 

Comments


bottom of page