top of page

ದೂರವಾಣಿ, ವಿದ್ಯುತ್ ಸಮಸ್ಯೆ ಪರಿಹರಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು== ನರಸಿಂಹ ಕೋಣೆಮನೆ.


ree

ree

ಯಲ್ಲಾಪುರ.

ತಾಲೂಕಿನ ನಂದೊಳ್ಳಿ ಭಾಗದಲ್ಲಿ ಹಲವು ದಿನಗಳಿಂದ ದೂರವಾಣಿ ಸಂಪರ್ಕ ಕೆಟ್ಟಿದೆ. ಕರೆಂಟ್ ವ್ಯತ್ಯವಾದಾಗ ದೂರವಾಣಿ ವಿನಿಮಯ ಕೇಂದ್ರದಲ್ಲಿ ಇರುವ ಜನರೇಟರ್ ಸಹ ಬಂದ್ ಆಗುತ್ತಿದೆ. ಈ ಭಾಗದಲ್ಲಿ ದೂರವಾಣಿ ನೆಟ್‍ವರ್ಕ ಸಮಸ್ಯೆ ಹಾಗೂ ವಿದ್ಯುತ್ ಅವ್ಯವಸ್ಥೆಯಿಂದಾಗಿ ಜನರು ಹೈರಾಣಾಗುತ್ತಿದ್ದಾರೆ. ಕೂಡಲೇ ಈ ಎರಡೂ ವ್ಯವಸ್ಥೆಗಳನ್ನು ಆಯಾ ಇಲಾಖೆಯವರು ಸರಿಮಾಡಬೇಕು ಇಲ್ಲವಾದರೆ ಸದ್ಯದಲ್ಲಿಯೇ ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ನಂದೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ಕೋಣೆಮನೆ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕಗಳು ನಿರಂತರವಾಗಿ ವ್ಯತ್ಯಯವಾಗುತ್ತಿವೆ. ನಿತ್ಯದ ಅವಶ್ಯಕತೆಗಳಲ್ಲಿ ಪ್ರಮುಖವಾದ ಇವೆರಡೂ ಸೇವೆಗಳು ಸರಿಯಾಗಿ ಸಿಗದೇ ಜನರಿಂದ ಹಿಡಿಶಾಪಕ್ಕೆ ತುತ್ತಾಗುತ್ತಿವೆ. ವಿದ್ಯುತ್ ಹಾಗೂ ಪೋನ್ ವ್ಯವಸ್ಥೆ ಸಂಪೂರ್ಣ ಹಳ್ಳಹಿಡಿದಿದ್ದು, ಜನರು ಹೈರಾಣಾಗುವಂತಾಗಿದೆ. ನಂದೊಳ್ಳಿ ಭಾಗದಲ್ಲಿ ಈ ವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಅನೇಕ ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೊಜನವಾಗಿ9ಲ್ಲ. ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು, ಇಲಾಖೆಯವರ ಸಹಕಾರದಲ್ಲಿ ವಿದ್ಯುತ್ ಮಾರ್ಗಗಳ ಅಂಚಿನಲ್ಲಿ ಲೈನ್ ಕಟಿಂಗ್ ಮಾಡಲಾಗಿದೆ. ಆದರೂ ವಿದ್ಯುತ್ ಸಮಸ್ಯೆ ನಿಂತಿಲ್ಲ. ಕೂಡಲೇ ದೂರವಾಣಿ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


ree

ಕರೆಂಟ್ ಇಲ್ಲದಿದ್ರೆ ಫೋನೂ ಇಲ್ಲ. ;

ಕಳೆದ ಹಲವಾರು ದಿನಗಳಿಂದ ನಂದೊಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕರೆಂಟ್ ಕೈಕೊಟ್ಟಾಗ ದೂರವಾಣಿ ಸಂಪರ್ಕವೂ ಸ್ಥಗಿತಗೊಳ್ಳುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.


-------------------------------------------------------------------------------------------------


 
 
 

Comments


bottom of page