top of page

ಮಳೆ ಅವಗಢಗಳು ; ಧರೆ ಕುಸಿದು ಮಹಿಳೆ ಸಾವು ; ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ ; ಗುಳ್ಳಾಪುರ ಸೇತುವೆಗೆ ಹಾನಿ.


ree

24-7-2021. ಶನಿವಾರ.

ಯಲ್ಲಾಪುರ

ree

ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಹಲವೆಡೆ ಅಪಾರ ಹಾನಿಯಾಗಿದೆ. ತಾಲೂಕಿನ ಕಳಚೆಯಲ್ಲಿ ಶುಕ್ರವಾರ ಮನೆಯ ಪಕ್ಕದ ಧರೆ ಕುಸಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಧರೆ ಕುಸಿದ ಪರಿಣಾಮ ಕಳಚೆಯ ದೇವಕಿ ನಾರಾಯಣ ಗಾಂವ್ಕಾರ್ ಮೃತ ಪಟ್ಟಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ;

ತಾಲೂಕಿನ ಹಾಸಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಲವಾಡ ಗ್ರಾಮದ ಕಬ್ಬಿನಗದ್ದೆ ಮಜರೆಯ 43 ವರ್ಷದ ವ್ಯಕ್ತಿಯೋರ್ವರು ಸೇತುವೆಯನ್ನು ದಾಟುತ್ತಿರುವಾಗ ನೀರಿನಲ್ಲಿ ಕೊಚ್ಚಿಹೋಗಿರುವುದಾಗಿ ಸ್ಥಳೀಯ ಇಬ್ಬರು ವ್ಯಕ್ತಿಗಳು ತಿಳಿಸಿದ್ದಾರೆ ಎಂದು ಹಾಸಣಗಿ ಪಿಡಿಒ ಎಸ್.ಸಿ.ವಿರಕ್ತಮಠ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಗುಳ್ಳಾಪುರ ಸೇತುವೆಗೆ ಹಾನಿ;

ree

ತಾಲೂಕಿನ ಗುಳ್ಳಾಪುರ-ಹಳವಳ್ಳಿ ಸಂಪರ್ಕ ಕಲ್ಪಿಸುವ ಸೇತುವೆಗೆ ಗಂಗಾವಳಿ ನದಿ ನೀರಿನ ರಭಸದಿಂದ ಕೊಚ್ಚಿಹೋಗಿ ತೀವೃ ಹಾನಿಯಾಗಿದ್ದು ಹಳವಳ್ಳಿ,ಶೇವ್ಕಾರ್,ಕೋನಾಳ,ಕಲ್ಲೇಶ್ವರ-ಗುಳ್ಳಾಪುರ ಸಂಪರ್ಕ ಕಡಿತಗೊಂಡಿದೆ. ಎರಡು ವರ್ಷಗಳ ಹಿಂದೆ ಡೋಂಗ್ರಿ ತೂಗು ಸೇತುವೆ ಕೊಚ್ಚಿಹೋದ ಕಹಿನೆನಪು ಮಾಸುವ ಮುನ್ನವೇ ಗುಳ್ಳಾಪುರ ಸೇತುವೆಯು ಹಾನಿಯಾಗಿರುವುದರಿಂದ ಈ ಭಾಗದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪ್ರಮುಖ ಸಂಪರ್ಕವನ್ನು ಕಡಿದುಕೊಂಡ ಗ್ರಾಮಗಳು ನಡುಗಡ್ಡೆಯಂತಾಗಿವೆ.

----advt---

ree
ree

---------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------

 
 
 

Comments


bottom of page