top of page

ಶೀರ್ಲೆ ಜಲಪಾತಕ್ಕೆ ತೆರಳಿದ್ದ 6 ಪ್ರವಾಸಿಗರು ಸುರಕ್ಷಿತ.

Jul 23, 2021
1 min read

23-7-2021. ಶುಕ್ರವಾರ.

ಯಲ್ಲಾಪುರ.

ತಾಲೂಕಿನ ಶೀರ್ಲೆ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹುಬ್ಬಳ್ಳಿ ಭಾಗದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ಇಂದು ಬೆಳಿಗ್ಗೆ ತಿಳಿಸಿದ್ದಾರೆ. ಮೂರು ಬೈಕ್ ನಲ್ಲಿ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು ಮಳೆಯ ರಭಸಕ್ಕೆ ಶಿರ್ಲೆಫಾಲ್ಸ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು. ಸಮೀಪದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಅವರು ಸುರಕ್ಷಿತವಾಗಿದ್ದಾರೆ. ಪ್ರವಾಸಿಗರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿಸಲಾಗಿದೆ.

ಶಿರ್ಲೆಫಾಲ್ಸ್ ಪ್ರದೇಶ

----ADVT----


---------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------





 
 
 

Comments


bottom of page