ಯಶಸ್ವಿಯಾಗಿ ನಡೆದ ಕೋವಿಡ್ ಲಸಿಕಾ ಮೇಳ
- news e - yellapur
- Jun 22, 2021
- 1 min read

ಯಲ್ಲಾಪುರ.
ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ತಾಲೂಕಾ ಆಸ್ಪತ್ರೆ ಮತ್ತು ಗುರುತಿಸಲಾದ ಕೆಲ ವಿಶೇಷ ಕೇಂದ್ರಗಳೂ ಸೇರಿ ಒಟ್ಟೂ 20 ಕೇಂದ್ರಗಳಲ್ಲಿ ಸೋಮವಾರ ನಡೆದ ಕೋವಿಡ್ ಲಸಿಕಾ ಮೇಳ ಯಶಸ್ವಿಯಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಸೋಮವಾರ ಒಟ್ಟೂ 2405 ಜನರಿಗೆ ಲಸಿಕೆ ನೀಡಲಾಗಿದೆ. ಜನರಿಂದಲೂ ಸಹ ಉತ್ತಮ ಸ್ಪಂದನೆ ದೊರೆತಿದೆ.

ಯಲ್ಲಾಪುರ-- ತಾಲೂಕಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕೊರತೆ.
ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಕೋವಿಡ್ ಲಸಿಕೆ ಕೊರತೆ ಉಂಟಾಯಿತು. ಲಸಿಕೆ ಹಾಕಿಸಿಕೊಳ್ಳಲು ವಿವಿಧ ಭಾಗಗಳಿಂದ ಸಾಕಷ್ಟು ಜನರು ಆಗಮಿಸಿದ್ದರು. ಕೊರೋನಾ ಮುಂಚೂಣಿ ವಾರಿಯರ್ಸಗಳು ಅವರ ಕುಟುಂಬದವರು ಹಾಗೂ 18-44 ವಯೋಮಾನದ ಹಲವರು ಲಸಿಕೆ ಪಡೆದುಕೊಳ್ಳಲು ತಾಲೂಕಾ ಅಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಬಂದಿದ್ದರು. ಆದರೆ ಮಂಗಳವಾರ ಮಧ್ಯಾಹ್ನದ ನಂತರ ಲಸಿಕೆಗಳು ಖಾಲಿಯಾಗಿದ್ದವು. ಹೀಗಾಗಿ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬಂದ ಜನರು ವಾಪಸ್ ಮರಳುವಂತಾಯಿತು.
ಈ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಪ್ರತಿಕ್ರಯಿಸಿ, ನಿರಿಕ್ಷೆಗಿಂತಲೂ ಹೆಚ್ಚು ಜನರು ಮಂಗಳವಾರ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು. ಹೀಗಾಗಿ ನಿಗದಿಪಡಿಸಲಾಗಿದ್ದ ಸಂಖ್ಯೆಯ ಲಸಿಕೆಗಳು ಮುಂಚಿತವಾಗಿ ಖಾಲಿಯಾದವು. ಬುಧವಾರ ಸಂಜೆಯ ವೇಳೆ ಲಸಿಕೆ ಬರಲಿದ್ದು, ಗುರುವಾರದಿಂದ ಮತ್ತೆ ಲಸಿಕೆ ನೀಡಲಾಗುವುದು ಎಂದರು.
------------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LDx7u0jeklJ4M91sLRx6cu
-------------------------------------------------------------------------------------------------




Comments