top of page

ಚಲಿಸುತ್ತಿರುವ ವಾಹನದ ಮೇಲೆ ಮರ ಬಿದ್ದು ಹಾನಿ


ree

ಯಲ್ಲಾಪುರ.

ಜೋರಾಗಿ ಸುರಿದ ಮಳೆಯಿಂದಾಗಿ ಚಲಿಸುತ್ತಿರುವ ವಾಹನದ ಮೇಲೆ ಮರ ಬಿದ್ದು ವಾಹನವು ಜಕಂಗೊಂಡ ಘಟನೆ ತಾಲೂಕಿನ ಭರತನಹಳ್ಳಿ ಸಮೀಪ ಉಚಗೇರಿಗೆ ತೆರಳುವ ಮಾರ್ಗದಲ್ಲಿ ಗುರುವಾರ ಸಂಜೆ ನಡೆದಿದೆ. ಮರ ಬಿದ್ದ ಪರಿಣಾಮ ವಾಹನ ಭಾಗಷಃ ಹಾನಿಯಾಗಿದೆ.

ree

ತೆಂಗಿನ ಮರ ಬಿದ್ದು ಮನೆಗೆ ಹಾನಿ;

ಯಲ್ಲಾಪುರ ಪಟ್ಟಣದ ಉದ್ಯಮನಗರದಲ್ಲಿ ಗುರುವಾರ ಬೆಳಿಗ್ಗೆ ವಾಸ್ತವ್ಯದ ಮನೆಯ ಮೇಲೆ ಮನೆಯ ಪಕ್ಕದ ತೆಂಗಿನ ಮರ ಮುರಿದು ಬಿದ್ದು ಮನೆಗೆ ಹಾನಿಯಾಗಿದೆ. ದಸ್ತಗೀರ್ ಗೋರಿ ಸಾಬ್ ಕಪಟಗಿ ಎಂಬುವವರ ಮನೆ ಇದಾಗಿದ್ದು, ಸುಮಾರು 10 ಸಾವಿರ ರೂ ಹಾನಿ ಆಗಿದೆ ಎಂದು ಕಂದಾಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ree

ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೂ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದು, ತಾಲೂಕಿನಲ್ಲಿ 58.6 ಮಿ.ಮಿ.ಮಳೆಯಾಗಿದೆ. ಈವರೆಗೆ ಒಟ್ಟೂ 718.8 ಮಿ.ಮಿ ಮಳೆಯಾದಂತಾಗಿದೆ.


------------------------------------------------------------------------------------------------


-------------------------------------------------------------------------------------------------



Comments


bottom of page