top of page

ಪರಿಸರ ಜಾಗೃತಿ ಹಾಗೂ ವೃಕ್ಷಾರೋಪಣ ಕಾರ್ಯಕ್ರಮ

Jun 17, 2021
1 min read

ಯಲ್ಲಾಪುರ :

ಪಟ್ಟಣದ ಬಾಳಗಿಮನೆ ಶಾಲಾ ಅವರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಾಲಾ ಅಭಿವೃದ್ಧಿ ಸಮೀತಿಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಪರಿಸರ ಜಾಗೃತಿ ಹಾಗೂ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹನುಮಂತ ನಾಯ್ಕ್ ಪ್ರಸ್ತಾವಿಕವಾಗಿ ಮಾತನಾಡಿ, ಆಮ್ಲಜನಕ ನೀಡುವ ಗಿಡ ಮರ ಬೆಳೆಸಿ ಪರಿಸರವನ್ನು ಉಳಿಸಬೇಕು. ಧರ್ಮಾಧಿಕಾರಿಯವರ ಮಾರ್ಗದರ್ಶನದಂತೆ ನಮ್ಮ ಕಾರ್ಯವ್ಯಾಪ್ತಿಯಲ್ಲಿ 20 ಕಡೆ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಡಿ ಎನ್ ಗಾಂವ್ಕರ್ ಮಾತನಾಡಿ, ಮೊದಲು ನಮ್ಮ ಮನೆಯ ಪರಿಸರ ಚೆನ್ನಾಗಿರಿಸಿಕೊಳ್ಳಬೇಕು. ಆಮ್ಲಜನಕ ಖರೀದಿಸುವ ಹಂತಕ್ಕೆ ನಾವು ತಲುಪಿದ್ದೇವೆ. ಇದೇರೀತಿ ಗಿಡಗಳನ್ನು ನಾಶಮಾಡಿದರೆ ನಮ್ಮ ಮಕ್ಕಳು ಉಸಿರಾಡಲು ಕಷ್ಟವಾಗಬಹುದು. ಕೇವಲ ಕಾಟಾಚಾರಕ್ಕೆ ಗಿಡ ನೆಡಬಾರದು. ನೆಟ್ಟ ಗಿಡವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು ಎಂದರು. ಹಸಿರು ಗಿಡಗಳನ್ನು ನೆಡಲಾಯಿತು.


ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷ ಶೇಖರ್ ಪಟಗಾರ, ಶಾಲೆಯ ಮುಖ್ಯಾಧ್ಯಾಪಕ ಗಜಾನನ ನಾಯ್ಕ್,ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಇಸಿಓ ಷಣ್ಮುಖ ಹೆಗಡೆ, ಯಲ್ಲಾಪುರ ಹೋಬಳಿಯ ಉಪವಲಯ ಅರಣ್ಯಾಧಿಕಾರಿ ಸಂಜಯ ಬೋರ್ಗಲ್ಲಿ, ಪಟ್ಟಣ ಪಂಚಾಯತಿ ಸದಸ್ಯೆ ಗೀತಾ ದೇಶ ಭಂಡಾರಿ, ಉದ್ಯಮ ನಗರದ ಒಕ್ಕೂಟದ ಅಧ್ಯಕ್ಷೆ ಸುಧಾ ಶೇಟ್, ಯಲ್ಲಾಪುರ - ಮುಂಡಗೋಡ ತಾಲೂಕಿನ ಆಂತರಿಕ ಲೆಕ್ಕಪರಿಶೋಧಕ ನೇತ್ರಾವತಿ ನಾಯ್ಕ್, ತಾಲೂಕಿನ ಕೃಷಿ ಮೇಲ್ವಿಚಾರಕರಾದ ಸತೀಶ್ ನಾಯ್ಕ್ , ಉದ್ಯಮ ನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಜ್ಯೋತಿ ಪಾಠಣಕಾರ್ ಮುಂತಾದವರು ಇದ್ದರು.

------------------------------------------------------------------------------------------------


-------------------------------------------------------------------------------------------------



Comments


bottom of page