top of page

ಸ್ವರ್ಣವಲ್ಲೀ ಶ್ರೀಗಳಿಂದ " E - ಯಲ್ಲಾಪುರ " ವೆಬ್‍ಸೈಟ್ ಲೋಕಾರ್ಪಣೆ.

ಯಲ್ಲಾಪುರ:

ಇಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳ ಅಗತ್ಯ ಬಹಳ ಇದೆ. ಈಗ ಗ್ರಾಮೀಣ ಭಾಗಗಳೂ ಸೇರಿದಂತೆ ಎಲ್ಲೆಡೆ ಎಲೆಕ್ಟ್ರಾನಿಕ್ ಸೌಲಭ್ಯಗಳು ವಿಸ್ತರಣೆಗೊಂಡಿರುವುದರಿಂದ ಹಾಗೂ ಕೋವಿಡ್‍ನಂತಹ ಸಂದರ್ಭದಲ್ಲಿ ವಿವಿಧ ಮಾಹಿತಿಗಳು ತಕ್ಷಣಕ್ಕೆ ಜನರನ್ನು ತಲುಪಲು ಡಿಜಿಟಲ್ ಮಾಧ್ಯಮ ಹೆಚ್ಚು ಸಹಕಾರಿಯಾಗಿದೆ ಎಂದು ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಹೇಳಿದರು.

ree

ಅವರು ಸ್ವರ್ಣವಲ್ಲೀ ಮಠದಲ್ಲಿ ಸುಜ್ಞಾನ ನೆಟ್ವರ್ಕ್ಸ್ ಯಲ್ಲಾಪುರ ಅವರ " E-ಯಲ್ಲಾಪುರ '' ವೆಬ್‍ಸೈಟ್ ಅನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳನ್ನು ಜನರಿಗೆ ತಲುಪಿಸುವ ಸುಜ್ಞಾನ ನೆಟ್ವರ್ಕ್ಸ್ ಯಲ್ಲಾಪುರ ಅವರ ಈ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯವಾದದ್ದು." E - ಯಲ್ಲಾಪುರ " ಡಿಜಿಟಲ್ ಮಾಧ್ಯಮದ ಅಮೂಲ್ಯ ಸೇವೆಯು ನಮ್ಮ ಜಿಲ್ಲೆಯ ಎಲ್ಲ ಪುರಗಳನ್ನೂ ತಲುಪುವಂತಾಗಲಿ. ಈ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಿ, ಹೊಸ,ಹೊಸ ಆಯಾಮಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸುಜ್ಞಾನ ನೆಟ್ವರ್ಕ್ಸ್ ಪರವಾಗಿ ಜ್ಯೋತಿರಾದಿತ್ಯ ಭಟ್ ಹಾಗೂ ಗಣಪತಿ ಭಟ್ ಯಲ್ಲಾಪುರ ಶ್ರೀಗಳಿಗೆ ಫಲಸಮರ್ಪಣೆ ಮಾಡಿ, ವಂದಿಸಿದರು.

ree


----------------------------------------------------------------------------------------------------------------

ree


Comments


bottom of page